ಆನೆ ಹುಲ್ಲು
	ಪೆನ್ನಿಸಿಟಂ ಪರ್‍ಪ್ಯೂರಿಯಂ ಅಥವಾ ಆನೆಹುಲ್ಲು ಅಥವಾ ದಪ್ಪ ನೇಪಿಯರ್ ಹುಲ್ಲು. ಇದರ ಮೂಲಸ್ಥಾನ ದಕ್ಷಿಣ ಆಫ್ರಿಕ. ಈ ಹುಲ್ಲನ್ನು 1913 - 15 ರ ಸಮಯದಲ್ಲಿ ಭಾರತಕ್ಕೆ ತಂದರು. ಇದಕ್ಕೆ ತೆವಳು ಆಕಾರದ ಪ್ರಕಂದಗಳಿವೆ. ಅಧಿಕ ಫಸಲು ನೀಡುವ ಹುಲ್ಲು. ಫಲವತ್ತಾದ ಭೂಮಿಯಲ್ಲಿ ಬೆಳೆಸಲು ಅನುಕೂಲ. ಸಂತಾನೋತ್ಪತ್ತಿ ಸಾಮಾನ್ಯವಾಗಿ ಟಸಕ್ಸ್ ಅಥವಾ ಸೆಟ್ಸ್‍ಗಳಿಂದ (ಕಂದು). ವರ್ಷಕ್ಕೆ ಸುಮಾರು 8-12 ಬಾರಿ ಕತ್ತರಿಸಬಹುದು. ಒಟ್ಟು ಫಸಲು ವರ್ಷಕ್ಕೆ ಸುಮಾರು 3,000 ಪೌಂಡುಗಳಷ್ಟು. ಈ ಹುಲ್ಲಿನ ಪ್ರಮುಖ ಉಪಯೋಗ ಮೇವಿಗಾಗಿ. ಸಿಲೇಜ್‍ಗಳಿಗೂ ಬಳಸಬಹುದು.
(ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ